ಭಾರತದ ಹಣಕಾಸು ವಲಯ

 ಭಾರತದ ಹಣಕಾಸು ವಲಯ

ಭಾರತದ ಹಣಕಾಸು ವಲಯದ ವಿಧಗಳು

ಎ. ಹಣಕಾಸು ಮಾರುಕಟ್ಟೆ 

ಅಲ್ಪಾವಧಿಯ ಉದ್ದೇಶಗಳಿಗೆ ಹಣವನ್ನು ಸಾಲ ನೀಡುವ ಮತ್ತು ತೆಗೆದುಕೊಳ್ಳುವ ಮಾರುಕಟ್ಟೆಯನ್ನು ಹಣದ ಮಾರುಕಟ್ಟೆ ಎನ್ನುವರು. ಆರ್.ಬಿ.ಐ ನ ಪ್ರಕಾರ ಅಲ್ಪಕಾಲಿಕ ಹಣಕಾಸು ವ್ಯವಹಾರ ಮಾಡುವ ಕೇಂದ್ರವನ್ನು ಹಣದ ಮಾರುಕಟ್ಟೆ ಎನ್ನುವರು. ಆರ್.ಬಿ.ಐ ಹಣದ ಮಾರುಕಟ್ಟೆಯ ಮುಂದಾಳತ್ವ ವಹಿಸಿಕೊಳ್ಳುತ್ತದೆ. ಇದರಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯ ಎಂಬ ಎರಡು ವಿಧಗಳಿವೆ

1. ಸಂಘಟಿತ ವಲಯ ಮತ್ತು ಅದರ ಹಣಕಾಸು ಸಂಸ್ಥೆಗಳು

ವ್ಯವಸ್ಥಿತವಾಗಿ ಬೆಳೆದು ಬಂದ ಮಾರುಕಟ್ಟೆಯಾದ ಇದನ್ನು ಆಧುನಿಕ ವಲಯ ಮತ್ತು ಸಂಘಟನಾತ್ಮಕ ಮಾರುಕಟ್ಟೆ ಎಂತಲೂ ಕರೆಯುವರು. ರಿಜರ್ವ್ ಬ್ಯಾಂಕ್, ಎಸ್.ಬಿ.ಐ ಬ್ಯಾಂಕ್ ಮತ್ತು ಅದರ ಸಂಸ್ಥೆಗಳು, ವಿದೇಶಿ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಹಣಕಾಸಿನ ಸಂಸ್ಥೆ ಮತ್ತು ನಿಗಮಗಳು ಇದರ ಪ್ರಮುಖ ಹಣಕಾಸು ಸಂಸ್ಥೆಗಳು. ಇವುಗಳನ್ನು ಎರಡು ವಿಧವಾಗಿ ವಿಂಗಡಿಸಲಾಗಿದೆ

ಕರೆ ಮಾರುಕಟ್ಟೆ: 1-7 ದಿನಗಳ ಒಳಗೆ ಹಣ ನೀಡುಬೇಕೆಂಬ ಷರತ್ತಿನ ಮೇಲೆ ಹಣ ನೀಡುವ ಮಾರುಕಟ್ಟೆಯಾಗಿದೆ.

ಹುಂಡಿ ಮಾರುಕಟ್ಟೆ: ಒಬ್ಬರು ಇನ್ನೊಬ್ಬರಿಗೆ ಬರೆದುಕೊಟ್ಟ ವಾಗ್ದಾನ ಪತ್ರಗಳೇ ಹುಂಡಿಗಳಾಗಿವೆ. ಇವುಗಳಲ್ಲಿ ಖಜಾನೆ ಹುಂಡಿಗಳು (ಸರಕಾರದ ಸಾಲ ಪತ್ರಗಳು), ವಾಣಿಜ್ಯ ಹುಂಡಿಗಳು (ಖಾಸಗಿ ವ್ಯಕ್ತಿಗಳ ವಾಗ್ದಾನ ಪತ್ರಗಳು) ಆಧಾರ ಮಾರುಕಟ್ಟೆ (ಚರಾಸ್ತಿ ಮತ್ತು ಚಿರಾಸ್ತಿಗಳ ಮೇಲೆ ಸಾಲ ಪಡೆಯುವ ಮಾರುಕಟ್ಟೆ) ಮತ್ತು ವಾಣಿಜ್ಯ ಪತ್ರಗಳ ಮಾರುಕಟ್ಟೆ (ಖರೀದಿ ಬಿಲ್ ಮತ್ತು ಮಾರಾಟ ಬಿಲ್ ಇವುಗಳ ಆಧಾರದ ಮೇಲೆ ಸಾಲ ನೀಡುವ ಮಾರುಕಟ್ಟೆಯಾಗಿದೆ)

2. ಅಸಂಘಟಿತ ವಲಯ (ಆಧುನಿಕ ವಲಯ) ಮತ್ತು ಹಣಕಾಸು ಸಂಸ್ಥೆಗಳು

ದೇಶೀಯ ಬ್ಯಾಂಕರ್‍ಗಳು, ಹಣದ ಲೇವಾದೇವಿಗಾರರು, ಬ್ಯಾಂಕೇತರ ಹಣಕಾಸು ಮಧ್ಯವರ್ತಿ ಸಂಸ್ಥೆಗಳು ಮುಂತಾದವರು

ಬಿ. ಬಂಡವಾಳ ಮಾರುಕಟ್ಟೆ

ದೀರ್ಘಾವಧಿ ಸಾಲ ಒದಗಿಸುವ ಮಾರುಕಟ್ಟೆಯನ್ನು ಬಂಡವಾಳ ಮಾರುಕಟ್ಟೆ ಎನ್ನುವರು. ಇಲ್ಲಿ ಷೇರುಗಳ ಮೂಲಕ ಬಂಡವಾಳ ಒದಗಿಸಲಾಗುತ್ತದೆ.

ಷೇರು ಮಾರುಕಟ್ಟೆ

ಷೇರು ಮಾರುಕಟ್ಟೆಯನ್ನು ಸಂಯುಕ್ತ ಬಂಡವಾಳ ಉದ್ದಿಮೆ ಎನ್ನುವರು. ಇದನ್ನು SEBI ನಿರ್ವಹಿಸುತ್ತದೆ. SEBI (ಸ್ಟಾಕ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ) 1988 ರಲ್ಲಿ ಸ್ಥಾಪನೆಯಾಯಿತು. ಕೇಂದ್ರ ಕಛೇರಿ ಮುಂಬೈನಲ್ಲಿದೆ. ಷೇರು ಮಾರುಕಟ್ಟೆಯ ಕುರಿತಾದ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಲು ಇದನ್ನು ಸ್ಥಾಪಿಸಲಾಯಿತು.

ಭಾರತದ ಮೊದಲ ಷೇರುಮಾರುಕಟ್ಟೆಯಾದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಅನ್ನು 1875 ರಲ್ಲಿ ಸ್ಥಾಪಿಸಲಾಯಿತು. ಕೇಂದ್ರ ಕಛೇರಿ ಮುಂಬೈನಲ್ಲಿದೆ.

1994 ರಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ NSE ಅನ್ನು ಸ್ಥಾಪಿಸಲಾಯಿತು. ಕೇಂದ್ರ ಕಛೇರಿ ಮುಂಬೈನಲ್ಲಿದೆ.

ಷೇರಿನ ವಿಧಗಳು

ಪ್ರಾಮುಖ್ಯತಾ (ಪ್ರಾಶಸ್ತ್ಯದ) ಷೇರು : ಲಾಭದ ಪ್ರಮಾಣವನ್ನು ಮೊದಲೇ ನಿರ್ಧರಿಸಿ ಹಂಚಲಾಗುತ್ತದೆ

ಸಾಮಾನ್ಯ ಷೇರು : ಇಲ್ಲಿ ಷೇರುದಾರರು ಕಂಪೆನಿಯ ಲಾಭ ನಷ್ಟಗಳಲ್ಲಿ ಪಾಲು ಹೊಂದಿರುತ್ತಾರೆ

ಲಾಭ ಪಲಾಯನ (ಆಡಳಿತಗಾರರ) ಷೇರು : ಸಂಪೂರ್ಣವಾಗಿ ಸ್ವತಂತ್ರ ಕಂಪೆನಿಯು ಹೊಂದಿರುವ ಷೇರುಗಳಾಗಿವೆ 

ಬ್ಯಾಂಕ್ ವ್ಯವಸ್ಥೆ

1770 - ಬ್ಯಾಂಕ್ ಆಫ್ ಹಿಂದೂಸ್ತಾನ್ ಭಾರತದಲ್ಲಿ ಸ್ಥಾಪನೆಯಾದ ಮೊದಲ ಬ್ಯಾಂಕ್

1860 - ಭಾರತದಲ್ಲಿ ಕೂಡುಬಂಡವಾಳ ಬ್ಯಾಂಕುಗಳ ಸ್ಥಾಪನೆಗೆ ಅವಕಾಶ

1881 - ಔಧ್ ಕಮರ್ಷಿಯಲ್ ಬ್ಯಾಂಕ್ (ಭಾರತೀಯರಿಂದಲೇ ಪ್ರಾರಂಭವಾದ ಪ್ರಥಮ ಭಾರತೀಯ ಬ್ಯಾಂಕ್)

1894 - ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಂಪೂರ್ಣವಾಗಿ ಭಾರತೀಯರ ಆಡಳಿತಕ್ಕೆ ಒಳಪಟ್ಟ ಮೊದಲ ಬ್ಯಾಂಕ್ ಆಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

1921 ರಲ್ಲಿ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಅನ್ನು ಸ್ಥಾಪಿಸಲಾಯಿತು. ಜಾನ್ ಮ್ಯಾಥ್ಯೂ ಇದರ ಮೊದಲ ಮುಖ್ಯಸ್ಥರಾಗಿದ್ದರು. ಇದೇ ಬ್ಯಾಂಕ್ ಮುಂದೆ 1955 ರಲ್ಲಿ ರಾಷ್ಟ್ರೀಕರಣಗೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬದಲಾಯಿತು. ರಾಷ್ಟ್ರೀಕರಣ ಸಮಯದಲ್ಲಿ ಎಸ್.ಬಿ.ಐ ಬ್ಯಾಂಕ್ ನ ಮುಖ್ಯಸ್ಥರಾಗಿದ್ದವರು ಬೆನಗಲ್ ರಾಮರಾಯರು. ಇದರ ಕೇಂದ್ರ ಕಛೇರಿ ಮುಂಬೈನಲ್ಲಿದೆ. ಎಸ್.ಬಿ.ಐ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಎನಿಸಿಕೊಂಡಿದೆ.

ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ 1969 ರಲ್ಲಿ 50 ಕೋಟಿಗಿಂತ ಹೆಚ್ಚು ಠೇವಣಿ ಹೊಂದಿದ್ದ 14 ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಲಾಯಿತು. 1980 ರಲ್ಲಿ 200 ಕೋಟಿಗೂ ಅಧಿಕ ಮೌಲ್ಯ ಹೊಂದಿರುವ 6 ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಲಾಯಿತು.

ಪರಿಶಿಷ್ಟ (ಶೆಡ್ಯೂಲ್ಡ್) ಬ್ಯಾಂಕ್ : 5 ಲಕ್ಷಕ್ಕಿಂತ ಹೆಚ್ಚಿನ ಬಂಡವಾಳ ಮತ್ತು ಆಪದ್ಧನ ನಿಧಿಯನ್ನು ಹೊಂದಿರುತ್ತವೆ. ಇವು ಆರ್.ಬಿ.ಐ ನ ನಿಬಂಧನೆಗೆ ಒಳಪಟ್ಟಿರುತ್ತವೆ ಮತ್ತು ಆರ್.ಬಿ.ಐ ಈ ಬ್ಯಾಂಕುಗಳಿಗೆ ಸಾಲವನ್ನು ನೀಡುತ್ತವೆ.

ಪರಿಶಿಷ್ಟೇತರ (ನಾನ್ ಶೆಡ್ಯೂಲ್ಡ್) ಬ್ಯಾಂಕ್ : 5 ಲಕ್ಷಕ್ಕಿಂತ ಕಡಿಮೆ ಬಂಡವಾಳ ಮತ್ತು ಆಪದ್ಧನ ನಿಧಿಯನ್ನು ಹೊಂದಿರುತ್ತವೆ. ಇವು ಆರ್.ಬಿ.ಐ ನ ನಿಬಂಧನೆಗೆ ಒಳಪಟ್ಟಿರುವುದಿಲ್ಲ ಮತ್ತು ಆರ್.ಬಿ.ಐ ಈ ಬ್ಯಾಂಕುಗಳಿಗೆ ಸಾಲವನ್ನು ನೀಡುವುದಿಲ್ಲ.

ವಾಣಿಜ್ಯ ಬ್ಯಾಂಕುಗಳ ಕಾರ್ಯಗಳು

1. ವಿವಿಧ ರಿತಿಯ ಠೇವಣಿಗಳನ್ನು ಸ್ವೀಕರಿಸುವುದು

ಚಾಲ್ತಿ ಖಾತೆ ಠೇವಣಿ : ವ್ಯಾಪಾರಸ್ಥರು, ಉದ್ಯಮಿಗಳು ಇಂಯಹ ಠೇವಣಿ ಹೊಂದಿರುತ್ತಾರೆ. ಇದನ್ನು ಬೇಡಿಕೆ ಠೇವಣಿ ಎಂತಲೂ ಕರೆಯುವರು. ಎಷ್ಟು ಬಾರಿ ಬೇಕಾದರೂ ಹಣ ವಿನಿಮಯ ಮಾಡಬಹುದು ಆದರೆ ಬಡ್ಡಿ ನೀಡುವುದಿಲ್ಲ

ಉಳಿತಾಯ ಖಾತೆ ಠೇವಣಿ : ಕಡಿಮೆ ಆದಾಯ ಹೊಂದಿರುವ ಸಂಸ್ಥೆಗಳು ಮತ್ತು ಮಧ್ಯಮ ವರ್ಗದ ಜನ ಹೊಂದಿರುವ ಖಾತೆಯಾಗಿದೆ. ಇಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಒಂದು ಅಥವಾ  ಎರಡು  ಬಾರಿ ಮಾತ್ರ ಹಣ ಬಿಡಿಸಬಹುದಾಗಿದೆ. ಕಡಿಮೆ ಬಡ್ಡಿ ನೀಡಲಾಗುತ್ತದೆ.

ಮುದ್ಧತಿ/ಅವಧಿ ಠೇವಣಿ : ಒಂದು ನಿರ್ದಿಷ್ಟ ಅವಧಿಯವರೆಗೆ ಹಣವನ್ನು ಠೇವಣಿ ಇಡಲಾಗುತ್ತದೆ. ಅವಧಿ ಮುಗಿಯುವವರೆಗು ಹಣವನ್ನು ಹಿಂತಿರುಗಿಸಿ ನೀಡುವುದಿಲ್ಲ. ಆದರೆ ಇದರಲ್ಲಿ ಬಡ್ಡಿಯ ಪ್ರಮಾಣ ಹೆಚ್ಚಾಗಿರುತ್ತದೆ.

ಆವರ್ತ ಠೇವಣಿ : ಒಂದು ನಿರ್ದಿಷ್ಟ ಅವಧಿಯವರೆಗೂ ಹಣವನ್ನು ಮಾಸಿಕ ಕಂತಿನಲ್ಲಿ ಕಟ್ಟುತ್ತಾ ಹೋಗುವುದು. ಕೊನೆಗೆ ಹಣವನ್ನು ಬಡ್ಡಿ ಸಮೇತ ನೀಡಲಾಗುತ್ತದೆ.

2. ಗ್ರಾಹಕರಿಗೆ ಸಾಲ ನೀಡುವುದು ಮತ್ತು ಅವರ ಹಣ ಒಡವೆ ದಾಖಲಾತಿಗಳಿಗೆ ಲಾಕರ್ ವ್ಯವಸ್ಥೆ ಕಲ್ಪಿಸುವುದು

3. ಗ್ರಾಹಕರು ತನ್ನ ಖಾತೆಯಲ್ಲಿರುವ ಠೇವಣಿ ಹಣಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆಯುವ ಓವರ್ ಡ್ರಾಫ್ಟ್ ಸೌಲಭ್ಯ ನೀಡುವುದು

4. ಹುಂಡಿಗಳನ್ನು ಮುರಿಯುವುದು

ಸಹಕಾರಿ ಬ್ಯಾಂಕುಗಳು

ಕೃಷಿ ಪತ್ತಿನ ಸಹಕಾರ ಬ್ಯಾಂಕುಗಳು

ಕೃಷಿಗೆ ಸಂಬಂಧಿಸಿದಂತೆ ಸಾಲ ಸೌಲಭ್ಯ ನೀಡುವ ಬ್ಯಾಂಕುಗಳು. ಇದರಲ್ಲಿ 2 ವಿಧ

1. ಅಲ್ಪಾವಧಿ ಕೃಷಿ ಪತ್ತಿನ ಸಹಕಾರ ಬ್ಯಾಂಕ್

ಅಪೆಕ್ಸ್ ಬ್ಯಾಂಕ್ – ರಾಜ್ಯ

ಡಿ.ಸಿ.ಸಿ ಬ್ಯಾಂಕ್ – ಜಿಲ್ಲೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ – ಗ್ರಾಮ

2. ದೀರ್ಘಾವಧಿ ಕೃಷಿ ಪತ್ತಿನ ಸಹಕಾರ ಬ್ಯಾಂಕ್

ಕೇಂದ್ರ ಭೂ ಅಭಿವೃದ್ಧಿ ಬ್ಯಾಂಕ್ - ರಾಜ್ಯ

ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ – ತಾಲ್ಲೂಕು

ಕೃಷಿಯೇತರ ಪತ್ತಿನ ಸಹಕಾರ ಬ್ಯಾಂಕುಗಳು

ಕೃಷಿಯನ್ನು ಹೊರತುಪಡಿಸಿ ಇತರ ಉದ್ಧೇಶಗಳಿಗೆ ಸಾಲ ಸೌಲಭ್ಯ ನೀಡುವ ಬ್ಯಾಂಕುಗಳು. ಅರ್ಬನ್ (ನಗರ) ಸಹಕಾರಿ ಬ್ಯಾಂಕುಗಳು, ಸರ್ಕಾರಿ ನೌಕರರ ಸಹಕಾರಿ ಬ್ಯಾಂಕುಗಳು.

ಲೀಡ್ ಬ್ಯಾಂಕುಗಳು

1969 ರಲ್ಲಿ ಸ್ಥಾಪನೆಯಾದವು, ಬ್ಯಾಂಕುಗಳಿಗೆ ಮಾರ್ಗದರ್ಶನ ಮತ್ತು ಬ್ಯಾಂಕ್ ಕಾರ್ಯಾಚರಣೆಗಳ ಸಂಯೋಜನೆ ಮಾಡುವುದು ಇದರ ಉದ್ದೇಶ

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು

1975 ರಲ್ಲಿ ಇಂದಿರಾಗಾಂಧಿ 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದಾಗ ಸಣ್ಣ ರೈತರು, ಕಾರ್ಮಿಕರು ಇವರ ಅನುಕೂಲಕ್ಕಾಗಿ ಪ್ರಾದೇಶಿಕ ಬ್ಯಾಂಕುಗಳನ್ನು ಸ್ಥಾಪಿಸಲಾಯಿತು. ಭಾರತದ ಮೊದಲ ಪ್ರಾದೇಶಿಕ ಬ್ಯಾಂಕುಗಳನ್ನು 1975 ಅಕ್ಟೋಬರ್ 2 ರಂದು ಸ್ಥಾಪಿಸಲಾಯಿತು.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಕಾರ್ಯಗಳು

1. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಅವಕಾಶ

2. ಗ್ರಾಮೀಣ ಪ್ರದೇಶದಲ್ಲಿ ಸ್ಥಿರಾಸ್ತಿ ಸ್ಥಾಪನೆ

3. ಗ್ರಾಮೀಣ ಪ್ರದೇಶದಲ್ಲಿ ಸ್ವಹುದ್ದೆ ಸ್ಥಾಪನೆಗೆ ತರಬೇತಿ

4. ಗ್ರಾಮೀಣಾಧಾರಿತ ಕೈಗಾರಿಕೆಗಳಿಗೆ ಬೆಂಬಲ

5. ಗ್ರಾಮೀಣಾಧಾರಿತ ಉತ್ಪನ್ನಗಳಿಗೆ ಮಾರುಕಟ್ಟೆ ಬೆಂಬಲ

ನಬಾರ್ಡ್ (NABARD)

National Bank for Agriculture and Rural Development ಎಂಬುದು ಇದರ ವಿಸ್ತಾರ ರೂಪ. ರಿಜರ್ವ್ ಬ್ಯಾಂಕ್ ನ ಒಬ್ಬ ಡೆಪ್ಯುಟಿ ಗವರ್ನರ್ ನಬಾರ್ಡ್ ನ ಅಧ್ಯಕ್ಷನಾಗಿರುತ್ತಾನೆ. 

ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ 6ನೇ ಪಂಚವಾರ್ಷಿಕ ಯೋಜನೆಯಡಿ 1982ರಲ್ಲಿ ಈ ಬ್ಯಾಂಕನ್ನು ಶಿವರಾಮನ್ ಸಮಿತಿಯ ಶಿಫಾರಸಿನ ಮೇರೆಗೆ ಸ್ಥಾಪಿಸಲಾಯಿತು. 

ಕೃಷಿ ಹಣಕಾಸಿಗೆ ಸಂಬಂಧಿಸಿದಂತೆ ಇದು ದೇಶದ ಅತಿ ದೊಡ್ಡ ಬ್ಯಾಂಕ್ ಆಗಿದೆ. ಇದರ ಕೇಂದ್ರ ಕಛೇರಿ ಮುಂಬೈನಲ್ಲಿದ್ದು ದೆಹಲಿ, ಚೆನ್ನೈ, ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಸ್ಥಾನಿಕ ಕಛೇರಿಗಳಿವೆ.

ನಬಾರ್ಡ್‍ನ ಪ್ರಮುಖ ಕಾರ್ಯಗಳು

1. ಗ್ರಾಮೀಣ ಪ್ರದೇಶದಲ್ಲಿ ಸಾಲ ನೀಡುವ ಅತ್ಯುನ್ನತ ಸಂಸ್ಥೆ

2. ಕೇಂದ್ರ ಹಾಗೂ ರಾಜ್ಯ ಸಹಕಾರಿ ಬ್ಯಾಂಕುಗಳ ಮೇಲ್ವಿಚಾರಣೆ ಮಾಡುತ್ತದೆ.

3. ಕೃಷಿ ಮತ್ತು ಗ್ರಾಮೀಣಾಭಿವೃದ್ದಿಗೆ ಸಂಬಧಿಸಿದಂತೆ ಸಂಶೋಧನೆ ನಡೆಸಲು ಅವಕಾಶ

ಕಾಮೆಂಟ್‌ಗಳು