ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

 ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ಡಾ|| ಬಿ.ಆರ್ ಅಂಬೇಡ್ಕರ್ ಅವರು ತಮ್ಮ ದ ಪ್ರಾಬ್ಲಮ್ ಆಫ್ ದ ರುಪೀ – ಇಟ್ಸ್ ಆರಿಜಿನ್ ಅಂಡ್ ಇಟ್ಸ್ ಸೊಲ್ಯೂಷನ್ ಎಂಬ ಕೃತಿಯಲ್ಲಿ ಆರ್.ಬಿ.ಐ ನ ಮಾರ್ಗದರ್ಶಿ ಸೂತ್ರಗಳ ಬಗ್ಗೆ ತಿಳಿಸಿದ್ದಾರೆ.

1935 ಏಪ್ರಿಲ್ 1 ರಂದು ಹಿಲ್ಟನ್ ಯಂಗ್ ಸಮಿತಿಯ ಶಿಫಾರಸಿನ ಮೇಲೆ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಯಾಯಿತು. ನಂತರ 1949 ಜನವರಿ 1 ರಲ್ಲಿ ಆರ್.ಬಿ.ಐ ರಾಷ್ಟ್ರೀಕರಣಗೊಂಡಿತು. ಇದರ ಕೇಂದ್ರ ಕಛೇರಿ ಮುಂಬೈನಲ್ಲಿದೆ. ರಿಜರ್ವ್ ಬ್ಯಾಂಕ್ ಅನ್ನು ಬ್ಯಾಂಕುಗಳ ಬ್ಯಾಂಕ್ ಎಂದು ಕರೆಯುವರು.

ಓಸ್ಬರ್ನ್ ಸ್ಮಿತ್ ಆರ್.ಬಿ.ಐ ನ ಮೊದಲ ಗವರ್ನರ್ ಆಗಿದ್ದರು. ಆರ್.ಬಿ.ಐ ನ ಮೊದಲ ಭಾರತೀಯ ಗವರ್ನರ್ ಸಿ.ಡಿ ದೇಶ್ ಮುಖ್. ಹಣಕಾಸು ಸಮನ್ವಯತೆ ಎಂಬ ಪರಿಕಲ್ಪನೆಯನ್ನು ವೈ.ವಿ ರೆಡ್ಡಿಯವರು ಮೊದಲ ಬಾರಿಗೆ ನೀಡಿದರು. ಸುಧಾ ಬಾಲಕೃಷ್ಣನ್  ಆರ್.ಬಿ.ಐ ನ ಮೊದಲ ಮುಖ್ಯ ಹಣಕಾಸು ಅಧಿಕಾರಿ ಆಗಿದ್ದರು.

1956 ರಿಂದ ರಿಜರ್ವ್ ಬ್ಯಾಂಕ್ ಕನಿಷ್ಟ ಆಪದ್ಧನ ಪದ್ಧತಿಯನ್ನು ಜಾರಿಗೆ ತಂದು ಹಣವನ್ನು ಮುದ್ರಿಸುತ್ತದೆ. ಇದರ ಅನುಸಾರ 115 ಕೋಟಿ ರೂ ಚಿನ್ನ ಮತ್ತು 85 ಕೋಟಿ ರೂ ವಿದೇಶಿ ವಿನಿಮಯ ದಾಸ್ತಾನು ಒಟ್ಟು 200 ಕೋಟಿಯನ್ನು ಭದ್ರತಾ ಮೊತ್ತವಾಗಿ ಇಟ್ಟುಕೊಂಡಿರಬೇಕಾಗುತ್ತದೆ.

ಆರ್.ಬಿ.ಐ ಗವರ್ನರ್ ಅನ್ನು ಪ್ರಧಾನಮಂತ್ರಿ ಕಛೇರಿಯು ಕೇಂದ್ರ ಹಣಕಾಸು ಸಚಿವಾಲಯದ ಶಿಫಾರಸಿನ ಮೇರೆಗೆ ನೇಮಕ ಮಾಡುತ್ತದೆ.

ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಯಗಳು

1. ಸರ್ಕಾರದ ಬ್ಯಾಂಕ್ ಮತ್ತು ಪ್ರತಿನಿಧಿಯಾಗಿ ಸರ್ಕಾರದ ಹಣವನ್ನು ಠೇವಣಿ ಇಟ್ಟುಕೊಳ್ಳುತ್ತದೆ

2. ಸರ್ಕಾರದ ಪರವಾಗಿ ಹಣವನ್ನು ಸ್ವೀಕರಿಸುತ್ತದೆ ಮತ್ತು ಸಂದಾಯ ಮಾಡುತ್ತದೆ.

3. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಾಲ ನೀಡುವುದು

4. ಸಾರ್ವಜನಿಕ ಸಾಲದ ಆಡಳಿತ ನಿರ್ವಹಣೆ

5. ಸರ್ಕಾರದ ಎಲ್ಲಾ ಖರ್ಚುವೆಚ್ಚಗಳಿಗೆ ಲೆಕ್ಕಪತ್ರಗಳನ್ನಿಡುವುದು

6. ವಾಣಿಜ್ಯ ಬ್ಯಾಂಕುಗಳಿಗೆ ಸಲಹೆ, ನಿರ್ದೇಶನ ನೀಡುವುದು

7. ಸಾಲದ ಹಣದ ನಿಯಂತ್ರಣಕ್ಕಾಗಿ ಪರಿಮಾಣಾತ್ಮಕ ಪದ್ಧತಿ ಮತ್ತು ಗುಣಾತ್ಮಕ ನಿಯಂತ್ರಣ ಪದ್ಧತಿಗಳನ್ನು ಅನುಸರಿಸುತ್ತದೆ.

8. ಸಾಲವನ್ನು ನೀಡುವ ಅಂತಿಮ ಬ್ಯಾಂಕ್/ ಅಂತಿಮ ಋಣಧಾತವಾಗಿದೆ

9. ಪತ್ತು ನಿಯಂತ್ರಣ

10. ವಿದೇಶಿ ವಿನಿಮಯ (Forex) ಪಾಲಕವಾಗಿದೆ.

11. ವಾಣಿಜ್ಯ ಬ್ಯಾಂಕುಗಳಿಗೆ ಮಾತ್ರ ಅನ್ವಯವಾಗುವ ದ್ವೈಮಾಸಿಕವಾಗಿ ಹಣಕಾಸು ನೀತಿಯನ್ನು ಬಿಡುಗಡೆ ಮಾಡುತ್ತದೆ.

12. 2 ರೂಪಾಯಿಯಿಂದ 2000 ರೂ ವರೆಗಿನ ಹಣವನ್ನು ಮುದ್ರಣ ಮಾಡುತ್ತದೆ. 1 ರೂ ಅನ್ನು ಕೇಂದ್ರ ಹಣಕಾಸು ಸಚಿವಾಲಯ ಮುದ್ರಣ ಮಾಡುತ್ತದೆ.

ನಗದು ಮೀಸಲು ಪ್ರಮಾಣ CRR (Cash Reserve Ratio) : 1949 ರ ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯಿದೆಯನ್ವಯ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಕೇಂದ್ರ ಬ್ಯಾಂಕಿನಲ್ಲಿ ತಮ್ಮ ಠೇವಣಿಗಳ ಒಂದಂಶವನ್ನು ಕಾಯ್ದಿರಿಸಿದ ಹಣವಾಗಿ ಮೀಸಲಿಡಬೇಕು.

ಶಾಸನ ಬದ್ಧ ದ್ರವ್ಯದ ಅನುಪಾತ SLR : ಗ್ರಾಹಕರು ವಾಣಿಜ್ಯ ಬ್ಯಾಂಕುಗಳಲ್ಲಿ ಠೇವಣಿ ಇರಿಸಿದ ಹಣದಲ್ಲಿ ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಇಟ್ಟುಕೊಳ್ಳಬಹುದಾದ ದ್ರವ್ಯದ ಪ್ರಮಾಣ

ಸೀಮಾಂತ ಆದರ್ಶ ಸೌಲಭ್ಯ MSF : ವಾಣಿಜ್ಯ ಬ್ಯಾಂಕುಗಳು ಸರ್ಕಾರಿ ಸಾಲ ಪತ್ರಗಳ ಆಧಾರದ ಮೇಲೆ ಆರ್.ಬಿ.ಐ ನಿಂದ ತತ್‍ಕ್ಷಣದಲ್ಲಿ ಪಡೆಯುವ ಅಲ್ಪಾವಧಿ ಸಾಲದ ಮೇಲೆ ವಿಧಿಸುವ ಬಡ್ಡಿದರವಾಗಿದೆ.

ಬ್ಯಾಂಕ್ ದರ : ವಾಣಿಜ್ಯ ಬ್ಯಾಂಕುಗಳು ಆರ್.ಬಿ.ಐ ನಿಂದ ಪಡೆಯುವ ಸಾಲದ ಮೇಲೆ ವಿಧಿಸುವ ಬಡ್ಡಿದರವಾಗಿದೆ.

ರೆಪೋ ದರ : ವಾಣಿಜ್ಯ ಬ್ಯಾಂಕುಗಳು ಸಾಲ ಪತ್ರಗಳ ಆಧಾರದ ಮೇಲೆ ಆರ್.ಬಿ.ಐ ನಿಂದ ಪಡೆಯುವ ಸಾಲದ ಮೇಲೆ ವಿಧಿಸುವ ಬಡ್ಡಿದರವಾಗಿದೆ.

ರಿವರ್ಸ್ ರೆಪೋ ದರ : ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿದ್ದ ಠೇವಣಿಳನ್ನು ರಿಸರ್ವ್ ಬ್ಯಾಂಕ್‍ನಲ್ಲಿ ಇಟ್ಟಾಗ, ರಿಸರ್ವ್ ಬ್ಯಾಂಕ್ ನೀಡುವ ಬಡ್ಡಿ ದರವಾಗಿದೆ.

ಈ ಮೇಲಿನವುಗಳಲ್ಲಿ CRR & SLRಗಳನ್ನು ಮೀಸಲು ಅನುಪಾತ ಸೂಚಕಗಳೆಂದು ಕರೆಯುವರು.

MSF, ಬ್ಯಾಂಕ್ ದರ, ರೆಪೋ ದರ, ರಿವರ್ಸ್ ರೆಪೋ ದರಗಳನ್ನು ಆರ್.ಬಿ.ಐ ನೀತಿ ದರ ಪಟ್ಟಿಗೆ ಸೇರಿಸಲಾಗಿದೆ.

ಭಾರತದಲ್ಲಿ ನೋಟು ಮುದ್ರಣಾಲಯಗಳು

ಸೆಕ್ಯುರಿಟಿ ಪ್ರಿಂಟಿಂಗ್ & ಮಿಂಟಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ – ದೆಹಲಿ

ಕರೆನ್ಸಿ ನೋಟು ಮುದ್ರಣಾಲಯ - ನಾಸಿಕ್ (ಮಹಾರಾಷ್ಟ್ರ)

ಬ್ಯಾಂಕ್ ನೋಟು ಮುದ್ರಣಾಲಯ – ದೇವಾಸ್ (ಮಹಾರಾಷ್ಟ್ರ), ಮೈಸೂರು, ಸಲಬೋನಿ (ಪ.ಬಂಗಾಳ)

ಭದ್ರತಾ ಅಚ್ಚು (ಸ್ಟ್ಯಾಂಪ್) ಮುದ್ರಣಾಲಯ - ಹೈದರಾಬಾದ್

ಭದ್ರತಾ ಮುದ್ರಣಾಲಯ - ನಾಸಿಕ್

ಭದ್ರತಾ ಪೇಪರ್ ಮಿಲ್ - ಹೋಶಂಗಾಬಾದ್ (ಮಧ್ಯಪ್ರದೇಶ)

ಠಂಕಸಾಲೆಗಳು – ಮುಂಬೈ, ಹೈದರಾಬಾದ್, ಕೋಲ್ಕತ್ತಾ, ನೋಯ್ಡಾ (ಉತ್ತರ ಪ್ರದೇಶ)

ಚಿನ್ನದ ಠೇವಣಿ - ನಾಗ್ಪುರ (ಮಹಾರಾಷ್ಟ್ರ)

ಕಾಮೆಂಟ್‌ಗಳು