ಭಾರತದ ಕೈಗಾರಿಕತೆ

 ಭಾರತದ ಕೈಗಾರಿಕತೆ

ಸರ್.ಎಂ.ವಿಶ್ವೇಶ್ವರಯ್ಯ ಅವರು ಕೈಗಾರಿಕರಣ ಇಲ್ಲವೇ ವಿನಾಶ ಎಂದು ಭಾರತಕ್ಕೆ ಕೈಗಾರಿಕೆಗಳ ಅವಶ್ಯಕತೆಯನ್ನು ಕುರಿತು ಹೇಳಿದರು.

ಪ್ರಮುಖ ಕೈಗಾರಿಕಾ ನೀತಿಗಳು

1948 : ಸ್ವತಂತ್ರ ಭಾರತದ ಮೊದಲ ಕೈಗಾರಿಕಾ ನೀತಿ

1956 : ಈ ಕೈಗಾರಿಕಾ ನೀತಿಯನ್ನು ಭಾರತದ ಆರ್ಥಿಕ ಸಂವಿಧಾನ ಎಂದು ಕರೆಯುವರು

ಈ ನೀತಿಯಲ್ಲಿ ಸಂಪೂರ್ಣವಾಗಿ ಸರ್ಕಾರದ ಜವಾಬ್ದಾರಿಗೆ ಒಳಪಟ್ಟ ಶೆಡ್ಯೂಲ್ ಎ ಕೈಗಾರಿಕೆಗಳು. ಸರ್ಕಾರ ಮತ್ತು ಖಾಸಗಿ ಸಹಯೋಗದ ಶೆಡ್ಯೂಲ್ ಬಿ ಕೈಗಾರಿಕೆಗಳು ಹಾಗೂ ಖಾಸಗಿ ಒಡೆತನದ ಶೆಡ್ಯೂಲ್ ಸಿ ಕೈಗಾರಿಕೆಗಳು ಎಂದು ಕೈಗಾರಿಕೆಗಳನ್ನು 3 ವಿಧಗಳಾಗಿ ವಿಂಗಡಿಸಲಾಯಿತು.

1970 : ಸುಬಿಮಲ್ ದತ್ ರ ಸಮಿತಿಯ ಸಲಹೆಯ ಮೇರೆಗೆ ರಚನೆಯಾದ ಕೈಗಾರಿಕಾ ನೀತಿ

1975 : ಆಂತರಿಕ ತುರ್ತುಪರಿಸ್ಥಿತಿ ಮತ್ತು 20 ಅಂಶಗಳ ಕಾರ್ಯಕ್ರಮಕ್ಕನುಗುಣವಾಗಿ ಈ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಾಯಿತು. ಈ ಕೈಗಾರಿಕಾ ನೀತಿಯು ಆರ್ಥಿಕ ವಿಕೇಂದ್ರಿಕರಣವನ್ನು ಪರಿಚಯಿಸಿತು.

1977 : ಈ ಕೈಗಾರಿಕಾ ನೀತಿಯು ಗುಡಿಕೈಗಾರಿಕೆಗಳ ಅಭಿವೃದ್ಧಿಗೆ ಪ್ರಾಧಾನ್ಯತೆ ನಿಡಿತು.

1991 : ಭಾರತದ ಆರ್ಥಿಕತೆಯಲ್ಲಿ ಜಾಗತಿಕರಣ, ಖಾಸಗಿಕರಣ ಮತ್ತು ಉದಾರಿಕರಣಗಳನ್ನು ಜಾರಿಗೆ ತರಲಾಯಿತು. ಬದಲಾವಣೆಯೊಂದಿಗೆ ವಿಸ್ತರಣೆ ಎಂಬುದು ಈ ಕೈಗಾರಿಕಾ ನೀತಿಯ ಪ್ರಮುಖ ಧ್ಯೇಯವಾಗಿದೆ.

ಕೈಗಾರಿಕೆಗಳ ವಿಧಗಳು

ಸಣ್ಣ ಮತ್ತು ಗೃಹ ಕೈಗಾರಿಕೆಗಳು 10 ರಿಂದ 50 ಕಾರ್ಮಿಕರನ್ನೊಳಗೊಂಡು 2 ಕೋಟಿಗಿಂತ ಕಡಿಮೆ ಬಂಡವಾಳ ಹೊಂದಿರುತ್ತದೆ.

ಮಧ್ಯಮ ಕೈಗಾರಿಕೆಗಳು 50 ರಿಂದ 300 ರ ವರೆಗೆ ಕಾರ್ಮಿಕರನ್ನೊಳಗೊಂಡಿದ್ದು, 2 ರಿಂದ 10 ಕೋಟಿ ಬಂಡವಾಳ ಹೊಂದಿರುತ್ತವೆ.

ಬೃಹತ್ ಕೈಗಾರಿಕೆಗಳು 300 ಕ್ಕೂ ಅಧಿಕ ಕಾರ್ಮಿಕರನ್ನೊಳಗೊಂಡಿದ್ದು 10 ಕೋಟಿಗೂ ಅಧಿಕ ಬಂಡವಾಳ ಹೊಂದಿರುತ್ತವೆ.

ಕಾರ್ಮಿಕ ನೀತಿ

ಕೃಷಿ ಕಾರ್ಮಿಕರು

ಪ್ರಥಮ ಕೃಷಿ ಕಾರ್ಮಿಕರ ತನಿಖಾ ಸಮಿತಿಯು 1950-51 ರಲ್ಲಿ ರಚನೆಯಾಯಿತು

ಇವರಲ್ಲಿ 2 ವಿಧ

1.ಹೊಂದಿಕೊಂಡ ಕಾರ್ಮಿಕರು : ಒಂದು ಬಡ ಕುಟುಂಬವು ಒಂದು ಒಪ್ಪಂದದ ಮೇರೆಗೆ ಇನ್ನೊಂದು  ಶ್ರೀಮಂತ ಕುಟುಂಬವನ್ನಾಧರಿಸಿ ಆ ಶ್ರೀಮಂತ ಕುಟುಂಬದ ಕೆಲಸಗಳನ್ನು ಮಾಡುತ್ತಾರೆ. ಇವರು ವರ್ಷವೆಲ್ಲಾ ಉದ್ಯೋಗ ಹೊಂದಿರುವ ಖಾಯಂ ಕಾರ್ಮಿಕರಾಗಿರುತ್ತಾರೆ. ಇವರು ಬೇರೆಯವರ ಹೊಲದಲ್ಲಿ ಕೆಲಸ ಮಾಡುವಂತಿಲ್ಲ. ಜೀತ ಕಾರ್ಮಿಕ, ದೀರ್ಘಕಾಲಿಕ ಕೃಷಿ ಸೇವಕ ಹಾಗೂ ಬಂಧಿತ ಕಾರ್ಮಿಕ ಇವರು ಈ ಪ್ರಕಾರದಲ್ಲಿ ಬರುವ ಕಾರ್ಮಿಕರಾಗಿದ್ದಾರೆ.

2.ಸಾಂದರ್ಭಿಕ ಕಾರ್ಮಿಕರು : ಅನಿರ್ದಿಷ್ಟಾವಧಿಯ ಕೆಲಸ ಹೊಂದಿರುತ್ತಾರೆ. ಯಾರ ಬಳಿ ಬೇಕಾದರೂ ಕೆಲಸ ಮಾಡುವ ಸ್ವಾತಂತ್ರ್ಯವಿರುತ್ತದೆ. ಸಣ್ಣ ರೈತರು, ಗೇಣಿದಾರರು ಮುಂತಾದವರು ಸಾಂದರ್ಭಿಕ ಕಾರ್ಮಿಕರಾಗಿದ್ದಾರೆ.

ಪ್ರಮುಖ ಕೃಷಿ ಕಾರ್ಮಿಕರ ಸುಧಾರಣಾ ಕಾನೂನುಗಳು

ಕನಿಷ್ಟ ಕೂಲಿ ಕಾಯ್ದೆ  1948

ಜೀತ ಪದ್ಧತಿ ನಿರ್ಮೂಲನೆ  1976

ಸಮಾನ ವೇತನ ಕಾಯ್ದೆ - 1976

ಕೂಲಿಗಾಗಿ ಕಾಳು - 1977

ಕೈಗಾರಿಕಾ ಕಾರ್ಮಿಕರು

1890 ರಲ್ಲಿ ಸ್ಥಾಪನೆಯಾದ ಬಾಂಬೆ ಗಿರಣಿ ಕಾರ್ಮಿಕರ ಸಂಘವು ಭಾರತದ ಮೊದಲ ಕಾರ್ಮಿಕರ ಸಂಘವಾಗಿದೆ. 1918 ರಲ್ಲಿ ಮದ್ರಾಸ್ ಟ್ರೇಡ್ ಯೂನಿಯನ್, 1920 ರಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸ್ಥಾಪನೆಯಾದವು

ಪ್ರಮುಖ ಕೈಗಾರಿಕಾ ಕಾರ್ಮಿಕರ ಸುಧಾರಣಾ ಕಾನೂನುಗಳು

1926  ಕಾರ್ಮಿಕ ಸಂಘಗಳ ಕಾಯ್ದೆ

1947  ಕೈಗಾರಿಕಾ ವಿವಾದಗಳ ಕಾಯ್ದೆ

1948 - ನೌಕರರ ರಾಜ್ಯ ವಿಮಾ ಕಾನೂನು

1952  ಕಾರ್ಮಿಕರ ಭವಿಷ್ಯನಿಧಿ ಕಾಯ್ದೆ

ಸಂವಿಧಾನದ 24 ನೇ ವಿಧಿಯು 14 ವರ್ಷದೊಳಗಿನ ಮಕ್ಕಳನ್ನು ಬಾಲಕರು ಎಂದು ತೀರ್ಮಾನಿಸಿ ಅವರನ್ನು ದುಡಿಸಿಕೊಳ್ಳುವುದು ಅಪರಾಧ ಎಂದು 1986 ರಲ್ಲಿ ಬಾಲಕಾರ್ಮಿಕ ಪದ್ಧತಿಯ ನಿಷೇಧ ಕಾನೂನನ್ನು ಜಾರಿಗೆ ತಂದಿತು. ನಂತರ 2016 ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದು ಬಾಲಕರ ವಯೋಮಿತಿಯನ್ನು 14 ರಿಂದ 18 ಕ್ಕೆ ಏರಿಸಲಾಯಿತು.

ನಿರುದ್ಯೋಗ

ಐಚ್ಛಿಕ ನಿರುದ್ಯೋಗ : ಇದನ್ನು ಮುಕ್ತ/ತೆರೆದ ನಿರುದ್ಯೋಗ ಎಂತಲೂ ಕರೆಯುವರು. ಕೆಲಸ ಮಾಡುವ ಸಾಮರ್ಥ್ಯವಿದ್ದು ಅದಕ್ಕೆ ತಕ್ಕ ಕೆಲಸ ಸಿಗದೇ ಹೋಗುವುದನ್ನು ಐಚ್ಛಿಕ ನಿರುದ್ಯೋಗ ಎನ್ನುವರು. ಇಲ್ಲಿ ವರ್ಷಪೂರ್ತಿ ಯಾವುದೇ ಕೆಲಸವಿರುವುದಿಲ್ಲ.

ಮರೆಮಾಚಿದ ನಿರುದ್ಯೋಗ : ಇದನ್ನು ಪ್ರಚ್ಛನ್ನ ನಿರುದ್ಯೋಗ ಎಂದು ಸಹ ಕರೆಯುವರು. ಒಂದು ಕೆಲಸದಲ್ಲಿ ಅವಶ್ಯಕತೆಗಿಂತ ಹೆಚ್ಚು ಜನರು ತೊಡಗಿದಾಗ ಅಂತಹ ನಿರುದ್ಯೋಗವನ್ನು ಮರೆಮಾಚಿದ ನಿರುದ್ಯೋಗ ಎನ್ನುವರು. ಇದರ ಪರಿಕಲ್ಪನೆ ನೀಡಿದಾತ ರ್ಯಾಗ್ನರಾಕ್ಸ್. ಈ ಪ್ರಕಾರದ ನಿರುದ್ಯೋಗವು ಹೆಚ್ಚಾಗಿ ಕೃಷಿ ಕ್ಷೇತ್ರದಲ್ಲಿ ಕಂಡುಬರುತ್ತದೆ.

ಮರೆಮಾಚಿದ ನಿರುದ್ಯೋಗದಲ್ಲಿ ಅಗತ್ಯಕಿಂತ ಹೆಚ್ಚು ಜನರು ಕೆಲಸದಲ್ಲಿ ತೊಡಗುವುದರಿಂದ ಇಲ್ಲಿ ಉಪಯೋಗವಾದ ಸಾಮರ್ಥ್ಯಕ್ಕಿಂತಲೂ ಕಡಿಮೆ ಉತ್ಪನ್ನ ಬರುತ್ತದೆ. ಇದನ್ನು ಶೂನ್ಯ ಉತ್ಪಾದನೆ/ಫಲಿತಾಂಶ ಎನ್ನುವರು

ಋತುಕಾಲಿಕ ನಿರುದ್ಯೋಗ : ಇದನ್ನು ಅರೆಕಾಲಿಕ ನಿರುದ್ಯೋಗ ಎಂತಲೂ ಕರೆಯುವರು. ಕೆಲಸಗಳು ಎಲ್ಲಾ ಕಾಲದಲ್ಲಿಯೂ ಸಿಗುವುದಿಲ್ಲ. ಇಂತಹ ಕೆಲಸಗಳಿಲ್ಲದ ಕಾಲವನ್ನು ಋತುಕಾಲಿಕ ನಿರುದ್ಯೋಗ ಎನ್ನುವರು.

ತಾಂತ್ರಿಕ ನಿರುದ್ಯೋಗ : ಆಧುನಿಕ ಯಂತ್ರೋಪಕರಣಗಳು ಮನುಷ್ಯನ ಕೆಲಸವನ್ನು ಕಸಿದುಕೊಳ್ಳುವುದರಿಂದ ಈ ತೆರನಾದ ನಿರುದ್ಯೋಗ ಉಂಟಾಗುತ್ತದೆ. ಈ ತೆರನಾದ ನಿರುದ್ಯೋಗ ಕೈಗಾರಿಕಾ ವಲಯದಲ್ಲಿ ಹೆಚ್ಚಾಗಿ ಕಾಣುತ್ತದೆ.

ಘರ್ಷಣಾತ್ಮಕ ನಿರುದ್ಯೋಗ : ಕೈಗಾರಿಕೋದ್ಯಮಿಗಳ ಹಾಗೂ ಕಾರ್ಮಿಕರ ನಡುವಿನ ಘರ್ಷಣೆಯಿಂದ ಉಂಟಾಗುವ ನಿರುದ್ಯೋಗವನ್ನು ಘರ್ಷಣಾತ್ಮಕ ನಿರುದ್ಯೋಗ ಎನ್ನುವರು.

ಆವರ್ತ ನಿರುದ್ಯೋಗ : ಚಕ್ರೀಯ ನಿರುದ್ಯೋಗ ಎಂಬುದು ಇದಕ್ಕಿರುವ ಮತ್ತೊಂದು ಹೆಸರು. ಆರ್ಥಿಕ ವ್ಯವಸ್ಥೆಯಲ್ಲಿ ಆಗಾಗ ಉಂಟಾಗುವ ಏರುಪೇರುಗಳಿಂದ ಇಂತಹ ನಿರುದ್ಯೋಗ ಉಂಟಾಗುತ್ತದೆ.

ಕಾಮೆಂಟ್‌ಗಳು