ಭಾರತದ ಆರ್ಥಿಕತೆ
ಭಾರತದ ಆರ್ಥಿಕತೆ
ಭಾರತವು
ಆರ್ಥಿಕವಾಗಿ ಪ್ರಪಂಚದ 4ನೇ ಅತಿದೊಡ್ಡ ದೇಶವಾಗಿದೆ. ಭಾರತವು ಮಿಶ್ರ ಆರ್ಥಿಕ ಪದ್ಧತಿಯನ್ನು
ಒಳಗೊಂಡಿದೆ. ಇಲ್ಲಿ ಸಾರ್ವಜನಿಕ (ಸರ್ಕಾರ) ಮತ್ತು ಖಾಸಗಿ ಸಂಸ್ಥೆಗಳೆರಡು ಸಹ ಆರ್ಥಿಕತೆಯಲ್ಲಿ
ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಭಾರತದ ಆರ್ಥಿಕತೆಯನ್ನು ಸಂಯುಕ್ತ ವಲಯ ಎಂದು ಸಹ ಕರೆಯುವರು.
1969 ರ
ಸುಬಿಮಲ್ ದತ್ ಕೈಗಾರಿಕಾ ಪರವಾನಗಿ ಸಮಿತಿಯು ಸಂಯುಕ್ತ ಆರ್ಥಿಕ ಪದ್ಧತಿಯು ಭಾರತಕ್ಕೆ
ಸೂಕ್ತವಾದುದೆಂದು ಸಲಹೆ ನೀಡಿತು. ಈ ಸಲಹೆಯ ಪ್ರಕಾರ ಭಾರತವು 1973 ರ
ಕೈಗಾರಿಕಾ ನೀತಿಯಲ್ಲಿ ಸಂಯುಕ್ತ ಆರ್ಥಿಕ ಪದ್ಧತಿಯನ್ನು ತನ್ನಲ್ಲಿ ಅಳವಡಿಸಿಕೊಂಡಿತು.
1991 ರ ಹೊಸ
ಆರ್ಥಿಕ ನೀತಿಯ ನಂತರ ಭಾರತದಲ್ಲಿ ಉದಾರಿಕರಣ (ಲಿಬರೈಸೇಷನ್), ಖಾಸಗಿಕರಣ (ಪ್ರೈವಟೈಸೇಷನ್) ಮತ್ತು ಜಾಗತಿಕರಣ
(ಗ್ಲೋಬಲೈಸೇಷನ್) ಪ್ರವೇಶವಾಯಿತು.
ಭಾರತದ ಜನಸಂಖ್ಯೆ
1921ರ ವರೆಗೆ ನಿಧಾನಗತಿಯಲ್ಲಿ ಏರುತ್ತಿದ್ದ
ಭಾರತದ ಜನಸಂಖ್ಯೆ 1921 ರ ನಂತರ ತೀವ್ರವಾಗಿ ಏರಿಕೆಯಾಗತೊಡಗಿತು. ಆದ್ದರಿಂದ 1921 ನೇ
ವರ್ಷವನ್ನು ಭಾರತದ ಮಹಾ ಇಬ್ಬಾಗದ ವರ್ಷವೆಂದು ಕರೆಯುತ್ತಾರೆ.
ಒಬ್ಬ
ಮನುಷ್ಯ ಎಂತಹ ಜೀವನ ನಡೆಸುತ್ತಿದ್ದಾನೆ ಎಂಬುದನ್ನು ತಿಳಿಯಲು ಎಂ.ಡಿ ಮೋರಿಸ್ ಅವರ ಜೀವನದ ಭೌತಿಕ
ಗುಣಮಟ್ಟ ಸೂಚ್ಯಾಂಕ (Physical Quality of Life Index) ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಸಂಸ್ಥೆ (UNDP) ನಿಗದಿಪಡಿಸಿರುವ
ಅಭಿವೃದ್ಧಿ ಸೂಚ್ಯಾಂಕ (H.D.I) ಅನ್ನು
ಬಳಸಲಾಗುತ್ತದೆ. ಮನುಷ್ಯನ ಜೀವತಾವಧಿ, ಶಿಕ್ಷಣ
ಮತ್ತು ಜೀವನದ ಗುಣಮಟ್ಟ ಈ ಮೂರು ಅಂಶಗಳನ್ನು ಪರಿಗಣಿಸಿ H.D.I ಮತ್ತು P.Q.L.I ಗಳು
ಅಧ್ಯಯನ ಮಾಡುತ್ತವೆ.
1949 ರಲ್ಲಿ
ಭಾರತ ಸರ್ಕಾರ ರಚಿಸಿದ ರಾಷ್ಟ್ರೀಯ ಆದಾಯ ಸಮಿತಿಗೆ ಅಧ್ಯಕ್ಷರಾಗಿ ಪಿ.ಸಿ ಮಹಾಲನೋಬಿಸ್ ಮತ್ತು
ಸದಸ್ಯರಾಗಿ ಬಿ.ಆರ್ ಗಾಡ್ಗಿಳ್ ಹಾಗೂ ಪ್ರೊ. ವಿ.ಕೆ.ಆರ್.ವಿ ರಾವ್ ಕಾರ್ಯ ನಿರ್ವಹಿಸಿದರು
ರಾಷ್ಟ್ರೀಯ ಆದಾಯ
NI = National Income ರಾಷ್ಟ್ರೀಯ ಆದಾಯ
ಒಂದು
ದೇಶದಲ್ಲಿ ಒಂದು ವರ್ಷದಲ್ಲಿ ಉತ್ಪಾದಿಸಲಾಗುವ ಒಟ್ಟು ಸರಕು ಮತ್ತು ಸೇವೆಗಳ ಮೌಲ್ಯವನ್ನು
ರಾಷ್ಟ್ರೀಯ ಆದಾಯ ಎನ್ನುವರು.
1868ರಲ್ಲಿ ಮೊದಲ ಬಾರಿಗೆ ದಾದಾಬಾಯಿ ನವರೋಜಿಯವರು ತಮ್ಮ The poverty and Un British Rule in India ಎಂಬ ಪುಸ್ತಕದಲ್ಲಿ ರಾಷ್ಟ್ರೀಯ ಆದಾಯ ಎಂಬ ಪರಿಕಲ್ಪನೆಯನ್ನು ನೀಡಿದರು.
ಪ್ರಸ್ತುತ/ಇಂದಿನ
ಬೆಲೆಗಳಲ್ಲಿ ಅಂದಾಜು ಮಾಡಲಾದ ರಾಷ್ಟ್ರೀಯ ಆದಾಯವನ್ನು ನಾಮರೂಪ ರಾಷ್ಟ್ರೀಯ ಆದಾಯ ಎನ್ನುವರು.
ಯಾವುದಾದರೂ
ಒಂದು ವರ್ಷವನ್ನು ಆಧಾರವಾಗಿ ಇಟ್ಟುಕೊಂಡು ಆ ವರ್ಷದಲ್ಲಿ ಇದ್ದಂತಹ ಬೆಲೆಗಳನ್ನು ಇಂದಿನ ಬೆಲೆಗಳ
ಜೊತೆ ಹೋಲಿಸಿ ನೋಡಿ ಅಂದಾಜು ಮಾಡಲಾದ ಆದಾಯವನ್ನು ನೈಜ ರಾಷ್ಟ್ರೀಯ ಆದಾಯ ಎನ್ನುವರು.
PI = Per capita Income ತಲಾದಾಯ
ಒಂದು
ದೇಶದ ಪ್ರತಿಯೊಬ್ಬ ವ್ಯಕ್ತಿಯ ವರ್ಷದ ಆದಾಯವನ್ನು ತಲಾದಾಯ ಎನ್ನುವರು. ಒಂದು ದೇಶದ ರಾಷ್ಟ್ರೀಯ
ಆದಾಯವನ್ನು ಆ ದೇಶದ ಜನಸಂಖ್ಯೆಯೊಂದಿಗೆ ಭಾಗಿಸಿದಾಗ ತಲಾದಾಯ ದೊರೆಯುತ್ತದೆ.
GNP = Gross National Product
(ಒಟ್ಟು ರಾಷ್ಟ್ರೀಯ ಉತ್ಪನ್ನ)
ಒಂದು
ವರ್ಷದಲ್ಲಿ ದೇಶದಲ್ಲಿರುವ ಭಾರತೀಯರು ಮತ್ತು ವಿದೇಶದಲ್ಲಿರುವ ಭಾರತೀಯರಿಂದ ಉತ್ಪಾದನೆಯಾದ ಒಟ್ಟು
ಸರಕು ಮತ್ತು ಸೇವೆಗಳ ಒಟ್ಟು ಆದಾಯವೇ ರಾಷ್ಟ್ರೀಯ ಉತ್ಪನ್ನವಾಗಿದೆ.
ನಿವ್ವಳ
ರಾಷ್ಟ್ರೀಯ ಉತ್ಪನ್ನ + ಸವಕಳಿ ವೆಚ್ಚ = ಒಟ್ಟು ರಾಷ್ಟ್ರೀಯ ಉತ್ಪನ್ನ
NNP = Net National Product
(ನಿವ್ವಳ ರಾಷ್ಟ್ರೀಯ ಉತ್ಪನ್ನ)
ಒಂದು
ವರ್ಷದಲ್ಲಿ ದೇಶದಲ್ಲಿರುವ ಭಾರತೀಯರು ಮತ್ತು ವಿದೇಶದಲ್ಲಿರುವ ಭಾರತೀಯರಿಂದ ಉತ್ಪಾದನೆಯಾದ ಒಟ್ಟು
ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯದಲ್ಲಿ ಸವಕಳಿ ವೆಚ್ಚವನ್ನು ಕಳೆದು ಉಳಿದಿರುವ ಆದಾಯವನ್ನು
ನಿವ್ವಳ ರಾಷ್ಟ್ರೀಯ ಉತ್ಪನ್ನ ಎನ್ನುವರು
ಒಟ್ಟು
ರಾಷ್ಟ್ರೀಯ ಉತ್ಪನ್ನ - ಸವಕಳಿ ವೆಚ್ಚ = ನಿವ್ವಳ ರಾಷ್ಟ್ರೀಯ ಉತ್ಪನ್ನ
GDP = Gross Domestic Product
(ಒಟ್ಟು ದೇಶೀಯ ಉತ್ಪನ್ನ)
ಒಂದು
ವರ್ಷದಲ್ಲಿ ಭಾರತದೊಳಗಿರುವ ಭಾರತೀಯರು ಮತ್ತು ವಿದೇಶಿಯರಿಂದ ಉತ್ಪಾದನೆಯಾದ ಸರಕು ಮತ್ತು ಸೇವೆಗಳ
ಒಟ್ಟು ಮೌಲ್ಯವೇ ಒಟ್ಟು ದೇಶೀಯ ಉತ್ಪನ್ನ. ಇಲ್ಲಿ ವಿದೇಶದಲ್ಲಿರುವ ಭಾರತೀಯರು ಸೇರುವುದಿಲ್ಲ.
ನಿವ್ವಳ
ದೇಶೀಯ ಉತ್ಪನ್ನ + ಸವಕಳಿ ವೆಚ್ಚ = ಒಟ್ಟು ದೇಶೀಯ ಉತ್ಪನ್ನ
ಆಧಾರ
ವರ್ಷದಲ್ಲಿ ಉತ್ಪಾದನೆಯಾದಷ್ಟೇ ಸರಕು ಇಂದಿನ ವರ್ಷದಲ್ಲೂ ಉತ್ಪಾದನೆಯಾಗಿ, ಆ ಸರಕಿನ ಬೆಲೆ ಹೆಚ್ಚಾಗಿದ್ದರೆ ಅದನ್ನು ನಿರ್ಲಿಪ್ತ GDP ಎನ್ನುವರು.
ಆಧಾರ
ವರ್ಷದಲ್ಲಿ ಉತ್ಪಾದನೆಯಾದ ಸರಕಿಗಿಂತ ಇಂದಿನ ವರ್ಷದಲ್ಲಿ ಉತ್ಪಾದನೆಯಾದ ಸರಕು, ಉತ್ಪಾದನೆ ಮತ್ತು ಬೆಲೆಗಳೆರಡರಲ್ಲೂ ಹೆಚ್ಚಾಗಿದ್ದರೆ ಅದನ್ನು
ಸಕಾರಾತ್ಮಕ GDP ಎನ್ನುವರು.
ಆಧಾರ
ವರ್ಷದಲ್ಲಿ ಉತ್ಪಾದನೆಯಾದ ಸರಕಿಗಿಂತ ಇಂದಿನ ವರ್ಷದಲ್ಲಿ ಉತ್ಪಾದನೆ ಕಡಿಮೆಯಾಗಿ ಆ ಸರಕಿನ
ಬೆಲೆಯಲ್ಲಿ ಮಾತ್ರ ಹೆಚ್ಚಳ ಆಗಿದ್ದರೆ ಅದನ್ನು ನಕಾರಾತ್ಮಕ GDP ಎನ್ನುವರು.
NDP = Net Domestic Product
(ನಿವ್ವಳ ದೇಶೀಯ ಉತ್ಪನ್ನ)
ಒಂದು
ವರ್ಷದಲ್ಲಿ ಭಾರತದೊಳಗಿರುವ ಭಾರತೀಯರು ಮತ್ತು ವಿದೇಶಿಯರಿಂದ ಉತ್ಪದನೆಯಾದ ಸರಕು ಮತ್ತು ಸೇವೆಗಳ
ಒಟ್ಟು ಮೌಲ್ಯದಲ್ಲಿ ಸವಕಳಿ ವೆಚ್ಚವನ್ನು ಕಳೆದು ಉಳಿಯುವುದೇ ನಿವ್ವಳ ದೇಶೀಯ ಉತ್ಪನ್ನ. ಇಲ್ಲಿ
ವಿದೇಶದಲ್ಲಿರುವ ಭಾರತೀಯರು ಸೇರುವುದಿಲ್ಲ.
ಒಟ್ಟು
ದೇಶೀಯ ಉತ್ಪನ್ನ - ಸವಕಳಿ ವೆಚ್ಚ = ನಿವ್ವಳ ದೇಶೀಯ ಉತ್ಪನ್ನ
ಸವಕಳಿ
ವೆಚ್ಚದ ವರದಿಯನ್ನು ಕೈಗಾರಿಕಾ ಮತ್ತು ವಾಣಿಜ್ಯ ಸಚಿವಾಲಯವು ಬಿಡುಗಡೆ ಮಾಡುತ್ತದೆ.
ರಾಷ್ಟ್ರೀಯ ಆದಾಯವನ್ನು ಮಾಪನ ಮಾಡುವ ಸಂಸ್ಥೆಗಳು
ಕರ್ನಾಟಕ – ಡೈರೆಕ್ಟರ್ ಆಫ್ ಎಕನಾಮಿಕ್ಸ್ ಅಂಡ್
ಸ್ಟ್ಯಾಟಟಿಕ್ಸ್ DES
ಭಾರತ -
ಸೆಂಟ್ರಲ್ ಸ್ಟ್ಯಾಟಟಿಕ್ಸ್ ಆರ್ಗನೈಸೇಷನ್ CSO
ಏಷಿಯಾ – ಏಷಿಯನ್ ಡೆವಲೆಪ್ಮೆಂಟ್ ಬ್ಯಾಂಕ್ ADB
ಪ್ರಪಂಚ – ಇಂಟರ್ ನ್ಯಾಷನಲ್ ಮಾನಿಟರಿ ಫಂಡ್
ಮತ್ತು ವಿಶ್ವಬ್ಯಾಂಕ್ IMF
& WB
ಒಂದು ದೇಶದ ಆರ್ಥಿಕ ಅಭಿವೃದ್ಧಿಯು ರಾಷ್ಟ್ರೀಯ ಆದಾಯ ಮತ್ತು ತಲಾದಾಯವನ್ನು ಅವಲಂಬಿಸಿರುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ