ಅರ್ಥಶಾಸ್ತ್ರದ ಅರ್ಥ ಮತ್ತು ವ್ಯಾಪ್ತಿ
ಅರ್ಥಶಾಸ್ತ್ರದ ಅರ್ಥ ಮತ್ತು ವ್ಯಾಪ್ತಿ
ಎಕನಾಮಿಕ್ಸ್ (Economic) ಪದವು
ಗ್ರೀಕ್ ಭಾಷೆಯ Oikos (ಓಯಿಕೋಸ್) ಮತ್ತು Nomos (ನೋಮೋಸ್) ಪದಗಳಿಂದ ಬಂದಿದೆ.
ಅರ್ಥಶಾಸ್ತ್ರದ ಪಿತಾಮಹಾ ಆಡಂ ಸ್ಮಿತ್. ಭಾರತೀಯ ಅರ್ಥಶಾಸ್ತ್ರದ
ಪಿತಾಮಹ ಕೌಟಿಲ್ಯ (ಚಾಣಕ್ಯ).
ಭಾರತದ ಅಮರ್ತ್ಯಸೇನ್ 1998 ರಲ್ಲಿ ಕಲ್ಯಾಣ ಅರ್ಥಶಾಸ್ತ್ರಕ್ಕೆ ನೊಬೆಲ್ ಬಹುಮಾನ ಪಡೆದರು.
ಅರ್ಥಶಾಸ್ತ್ರದ ಮೂಲಪರಿಕಲ್ಪನೆಗಳು
ಬಯಕೆ, ಉತ್ಪಾದನೆ, ಬೇಡಿಕೆ, ಪೂರೈಕೆ, ತುಷ್ಟಿಗುಣ ಮತ್ತು ಅನುಭೋಗ ಇವುಗಳು ಅರ್ಥಶಾಸ್ತ್ರದ ಮೂಲಪರಿಕಲ್ಪನೆಗಳು
ಬೇಡಿಕೆಯ ನಿಯಮಗಳು
1 ಮಾರುಕಟ್ಟೆಯಲ್ಲಿ ವಸ್ತುವಿನ ಬೆಲೆ ಹೆಚ್ಚಾದಾಗ ಬೇಡಿಕೆ ಕಡಿಮೆ ಆಗುತ್ತದೆ
2 ಮಾರುಕಟ್ಟೆಯಲ್ಲಿ ವಸ್ತುವಿನ ಬೆಲೆ ಕಡಿಮೆಯಾದಾಗ ಬೇಡಿಕೆ ಹೆಚ್ಚಾಗುತ್ತದೆ
ಪೂರೈಕೆಯ ನಿಯಮಗಳು
1 ಮಾರುಕಟ್ಟೆಯಲ್ಲಿ ವಸ್ತುವಿನ ಬೆಲೆ ಹೆಚ್ಚಾದಾಗ ಪೂರೈಕೆ ಹೆಚ್ಚಾಗುತ್ತದೆ
2 ಮಾರುಕಟ್ಟೆಯಲ್ಲಿ ವಸ್ತುವಿನ ಬೆಲೆ ಕಡಿಮೆಯಾದಾಗ ಪೂರೈಕೆ ಕಡಿಮೆಯಾಗುತ್ತದೆ
ಅರ್ಥಶಾಸ್ತ್ರದ
ವ್ಯಾಖ್ಯಾನಗಳು
ಸಂಪತ್ತಿನ ವ್ಯಾಖ್ಯಾನ : ಆ್ಯಡಂ ಸ್ಮಿತ್‍ರನ್ನು
ಅರ್ಥಶಾಸ್ತ್ರದ ಪಿತಾಮಹಾ ಎಂದು ಕರೆಯಲಾಗಿದೆ. ಆ್ಯನ್ ಎನ್‍ಕ್ವೆಯೆರಿ ಇಂಟೂ ದ ಕಾಸಸ್ ಆಫ್
ವೆಲ್ತ್ ಆಫ್ ನೇಷನ್ಸ್ (1776) ಎಂಬುದು ಅರ್ಥಶಾಸ್ತ್ರದ
ಕುರಿತಾದ ಇವರ ಪ್ರಸಿದ್ದ ಕೃತಿ. ಇವರು ಅರ್ಥಶಾಸ್ತ್ರವನ್ನು ಕುರಿತು ಸಂಪತ್ತಿನ ವ್ಯಾಖ್ಯಾನವನ್ನು
ನೀಡಿದರು.
ಯೋಗಕ್ಷೇಮದ ವ್ಯಾಖ್ಯಾನ : ಆಲ್ಫ್ರೆಡ್
ಮಾರ್ಷಲ್ ಅವರು 1890 ರಲ್ಲಿ
ಅರ್ಥಶಾಸ್ತ್ರದ ತತ್ವಗಳು (Principles of Economics) ಎಂಬ
ಕೃತಿಯನ್ನು ಬರೆದರು ಈ ಕೃತಿಯಲ್ಲಿ ಅರ್ಥಶಾಸ್ತ್ರದ ಯೋಗಕ್ಷೇಮದ ವ್ಯಾಖ್ಯಾನ ನೀಡಿದ್ದಾರೆ.
ಕೊರತೆಯ ವ್ಯಾಖ್ಯಾನ : ಪ್ರೊ. ಲಿಯೋನೆಲ್
ರಾಬಿನ್ಸ್ ಅವರು 1932 ರಲ್ಲಿ
ಬರೆದ ಆರ್ಥಿಕ ವಿಜ್ಞಾನದ ಸ್ವರೂಪ ಮತ್ತು ಮಹತ್ವ (An Essay on the Nature
and Significance of Economic Science) ಎಂಬ ತಮ್ಮ ಕೃತಿಯಲ್ಲಿ
ಕೊರತೆಯ ವ್ಯಾಖ್ಯಾನ ನೀಡಿದ್ದಾರೆ.
ಅಭಿವೃದ್ಧಿ/ಬೆಳವಣಿಗೆಯ ವ್ಯಾಖ್ಯಾನ : ಕೇನ್ಸ್ ಮತ್ತು ಸ್ಯಾಮುಯೆಲ್ ಸನ್ ಎಂಬುವವರು 1936 ರಲ್ಲಿ ಪ್ರಕಟವಾದ ಉದ್ಯೋಗ, ಬಡ್ತಿ ಮತ್ತು ಹಣದ ಸಾರ್ವತ್ರಿಕ ಸಿದ್ಧಾಂತ (The General Theory of Employment, Interest and Money) ಕೃತಿಯಲ್ಲಿ ಅಭಿವೃದ್ಧಿಯ ವ್ಯಾಖ್ಯಾನ ನೀಡಿದ್ದಾರೆ.
ಆರ್ಥಿಕ ಸ್ವರೂಪಗಳು
1 ಬಂಡವಾಳಶಾಹಿ ಆರ್ಥಿಕತೆ : ಆಡಂ ಸ್ಮಿತ್ ಈ ಪರಿಕಲ್ಪನೆಯನ್ನು ನೀಡಿದವರು. ಮುಂದುವರೆದ ರಾಷ್ಟ್ರಗಳಲ್ಲಿ ಈ ವ್ಯವಸ್ಥೆಯು ಹೆಚ್ಚಾಗಿ ಅಸ್ತಿತ್ವದಲ್ಲಿದೆ. ಇಲ್ಲಿ ದೇಶದ ಆರ್ಥಿಕತೆಯ ನಿಯಂತ್ರಣವು ಬಹುತೇಕ ಇಲ್ಲವೇ ಪೂರ್ಣಪ್ರಮಾಣದಲ್ಲಿ ಖಾಸಗಿ ವ್ಯಕ್ತಿಗಳ ಕೈಯಲ್ಲಿರುತ್ತದೆ. ಇಲ್ಲಿ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಅವಕಾಶವಿದ್ದು ಹೆಚ್ಚಿನ ಲಾಭಗಳಿಸಲು ಸಾಧ್ಯವಿರುತ್ತದೆ.
2 ಸಮಾಜವಾದಿ ಆರ್ಥಿಕತೆ : ಕಾರ್ಲ್ ಮಾರ್ಕ್ಸ ಈ ಪರಿಕಲ್ಪನೆಯನ್ನು ನೀಡಿದವರು. ಇಲ್ಲಿ ದೇಶದ ಆರ್ಥಿಕತೆಯ ನಿಯಂತ್ರಣವು ಪೂರ್ಣಪ್ರಮಾಣದಲ್ಲಿ ಸರ್ಕಾರದ ಕೈಯಲ್ಲಿರುತ್ತದೆ ಈ ವ್ಯವಸ್ಥೆಯನ್ನು ಕೇಂದ್ರೀಯ ಯೋಜನಾ ಅರ್ಥವ್ಯವಸ್ಥೆ ಅಥವಾ ಸರ್ಕಾರಿ ಅರ್ಥವ್ಯವಸ್ಥೆ ಎಂದು ಕರೆಯುವರು. ಇಲ್ಲಿ ಹೆಚ್ಚಿನ ಲಾಭ ಗಳಿಸಲು ಸಾಧ್ಯವಿಲ್ಲ. ಈ ವ್ಯವಸ್ಥೆಯಲ್ಲಿ ಬೆಲೆಗಳು ಯಾವಾಗಲೂ ಒಂದೇ ರೀತಿಯಲ್ಲಿರುತ್ತವೆ. ಇಲ್ಲಿ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಮತ್ತು ಹೆಚ್ಚಿನ ಲಾಭಗಳಿಸಲು ಸಾಧ್ಯವಿರುವುದಿಲ್ಲ
3 ಮಿಶ್ರ ಆರ್ಥಿಕತೆ : ಜೆ ಎಮ್ ಕೇನ್ಸ್ ಈ ಪರಿಕಲ್ಪನೆಯನ್ನು ನೀಡಿದವರು. ಇಲ್ಲಿ ಆರ್ಥಿಕತೆಯು ಸರ್ಕಾರಿ ಮತ್ತು ಖಾಸಗಿ ವ್ಯಕ್ತಿಗಳಿಬ್ಬರ ನಿಯಂತ್ರಣದಲ್ಲೂ ಇರುತ್ತದೆ. ಈ ವ್ಯವಸ್ಥೆಯು ಅಭಿವೃದ್ಧಿಶೀಲ ಹಾಗೂ ಹಿಂದುಳಿದ ರಾಷ್ಟ್ರಗಳಲ್ಲಿ ಕಂಡುಬರುತ್ತದೆ. ಭಾರತವು 1948 ರಲ್ಲಿ ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು.
ಸೂಕ್ಷ್ಮ
ಮತ್ತು ಸಮಗ್ರ ಅರ್ಥಶಾಸ್ತ್ರ
1920 ರಲ್ಲಿ
ರ್ಯಾಗ್ನರ್ ಫಿಶ್ ಎಂಬಾತ ಸೂಕ್ಷ್ಮ ಮತ್ತು ಸಮಗ್ರ ಅರ್ಥಶಾಸ್ತ್ರಗಳ ಪರಿಕಲ್ಪನೆಗಳನ್ನು ನೀಡಿದನು.
ಸೂಕ್ಷ್ಮ
ಅರ್ಥಶಾಸ್ತ್ರ
ವ್ಯವಸ್ಥೆಯ ಒಂದು ಭಾಗವನ್ನು ಕುರಿತು ಮಾತ್ರ ಅಧ್ಯಯನ ಮಾಡುತ್ತದೆ.
ಒಂದು ವಸ್ತುವಿನ ಬೆಲೆಯನ್ನು ನಿರ್ಣಯಿಸುವುದು
ಗ್ರಾಹಕನ ಆಸೆ ಬೇಡಿಕೆಗಳನ್ನು ಅಧ್ಯಯನ ಮಾಡುವುದು
ವಸ್ತುವನ್ನು ಉತ್ಪಾದಿಸಲು ತಗುಲುವ ವೆಚ್ಚಗಳನ್ನು ಕುರಿತು ಅಧ್ಯಯನ
ಕೂಲಿ, ಗೇಣಿ, ಬಡ್ಡಿ
ಮತ್ತು ಲಾಭ ಈ ಅಂಶಗಳ ಕುರಿತಾದ ಅಧ್ಯಯನ
ಪ್ರತಿ ವ್ಯಕ್ತಿಯು ತನ್ನ ಅಭಿವೃದ್ಧಿಯನ್ನು ಸಾಧಿಸಿಕೊಳ್ಳಲು
ಅನುಸರಿಸಬೇಕಾಧ ಅಂಶಗಳ ಬಗ್ಗೆ ಚರ್ಚಿಸುತ್ತದೆ.
ಸಮಗ್ರ
ಅರ್ಥಶಾಸ್ತ್ರ
ಇಡೀ ವ್ಯವಸ್ಥೆಯನ್ನು ಕುರಿತು ಅಧ್ಯಯನ ಮಾಡುತ್ತದೆ.
ಇದನ್ನು ವರಮಾನ ಮತ್ತು ಉದ್ಯೋಗಗಳ ತತ್ವ (Theory of Income and Employment) ಎಂದು ಸಹ ಕರೆಯಲಾಗುತ್ತದೆ. ಲಾರ್ಡ್ ಕೇನ್ಸ್ ಎಂಬ ಅರ್ಥಶಾಸ್ತ್ರಜ್ಞನಿಂದ ವರಮಾನ ಮತ್ತು ಉದ್ಯೋಗಗಳ ತತ್ವ ಆರಂಭವಾಯಿತು.
ಆರ್ಥಿಕ
ವಲಯಗಳು
1.ಪ್ರಾಥಮಿಕ ವಲಯ : ಕೃಷಿ, ಪಶುಪಾಲನೆ, ಹೈನುಗಾರಿಕೆ, ಗಣಿಗಾರಿಕೆ, ಅರಣ್ಯ, ತೋಟಗಾರಿಕೆ, ಮೀನುಗಾರಿಕೆ ಈ ವಲಯದ ಪ್ರಮುಖ ಕಸುಬುಗಳಾಗಿವೆ. ಈ ವಲಯದ ಕಾರ್ಮಿಕರನ್ನು ಕೆಂಪು ಕಾಲರ್ ಕಾರ್ಮಿಕರು ಎನ್ನುವರು. ಇಲ್ಲಿ ಕಾರ್ಮಿಕರ ಬಳಕೆ ಹೆಚ್ಚಾಗಿದ್ದರೂ ಉತ್ಪಾದನೆ ಮತ್ತು ಲಾಭಾಂಶ ಕಡಿಮೆಯಿರುತ್ತದೆ. 46.1% ರಷ್ಟು ಉದ್ಯೋಗ ನೀಡಿದೆ. 15.11% ರಷ್ಟು GDP ಗೆ ಆದಾಯ ನೀಡಿದೆ.
2.ದ್ವಿತೀಯ ವಲಯ : ಕಚ್ಚಾವಸ್ತುಗಳನ್ನು ಸಿದ್ಧವಸ್ತುಗಳನ್ನಾಗಿ ಮಾಡುವ ವಲಯವಾಗಿದೆ. ಇದನ್ನು ಕೈಗಾರಿಕಾ ವಲಯ ಅಥವಾ ತಯಾರಿಕಾ ವಲಯ ಎಂತಲೂ ಕರೆಯುವರು. ವಿದ್ಯುಚ್ಛಕ್ತಿ, ಉಕ್ಕು, ಸಂಸ್ಕರಿಸಿದ ಉತ್ಪನ್ನಗಳು, ಕಚ್ಚಾತೈಲ, ಕಲ್ಲಿದ್ದಿಲು, ಸಿಮೆಂಟ್, ರಸಗೊಬ್ಬರ ಮತ್ತು ನೈಸರ್ಗಿಕ ಅನಿಲ ಈ 8 ಪ್ರಮುಖ ಮೂಲ ಕೈಗಾರಿಕೆಗಳು ದ್ವಿತೀಯ ವಲಯದಲ್ಲಿ ಕಂಡು ಬರುತ್ತವೆ. ಈ ವಲಯದ ಕಾರ್ಮಿಕರನ್ನು ನೀಲಿ ಕಾಲರ್ ಕಾರ್ಮಿಕರು ಎನ್ನುವರು. 21.8% ರಷ್ಟು ಉದ್ಯೋಗ ನೀಡಿದೆ. 31.12% ರಷ್ಟು GDP ಗೆ ಆದಾಯ ನೀಡಿದೆ.
3.ತೃತೀಯ ವಲಯ : ಇದನ್ನು ಸೇವಾ ವಲಯ ಅಥವಾ ಟರ್ಶರಿ ವಲಯ ಎನ್ನುವರು. ಪ್ರಸ್ತುತ ಸೇವಾ ವಲಯವೇ ಅತಿ ದೊಡ್ಡ ಮಟ್ಟದಲ್ಲಿ ಲಾಭ ತಂದುಕೊಡುವ ವಲಯವಾಗಿದೆ. ಇಲ್ಲಿ ಯಾವುದೇ ವಸ್ತುಗಳನ್ನು ಉತ್ಪಾದಿಸುವ ಮಾರುವ ಕೊಳ್ಳುವ ಪ್ರಕ್ರಿಯೆ ಇರುವುದಿಲ್ಲ ಬದಲಾಗಿ ಸೇವೆಗಳನ್ನು ಹಣ ನೀಡಿ ಪಡೆಯಲಾಗುತ್ತದೆ.
ಬ್ಯಾಂಕಿಂಗ್, ಶಿಕ್ಷಣ, ವಿಮೆ, ವೈದ್ಯಕೀಯ ಚಿಕಿತ್ಸೆ, ಸಾರ್ವಜನಿಕ ಸೇವೆಗಳು, ಸಾರಿಗೆ ಮುಂತಾದವು ಈ ಸೇವಾ ವಲಯದಲ್ಲಿ ಬರುತ್ತವೆ. ಈ ವಲಯದ ಕಾರ್ಮಿಕರನ್ನು ಬಿಳಿ ಕಾಲರ್ ಕಾರ್ಮಿಕರು ಎನ್ನುವರು. ಮಹಿಳಾ ಕೇಂದ್ರೀಕೃತ ಉದ್ಯಮದಲ್ಲಿ ತೊಡಗಿರುವವರನ್ನು ಪಿಂಕ್ ಕಾಲರ್ ಕಾರ್ಮಿಕರು ಎನ್ನುವರು. ಇಲ್ಲಿ ಕಾರ್ಮಿಕರ ಬಳಕೆ ಕಡಿಮೆಯಿದ್ದರೂ ಉತ್ಪಾದನೆ ಮತ್ತು ಲಾಭಾಂಶ ಹೆಚ್ಚಾಗಿರುತ್ತದೆ. 32.1% ರಷ್ಟು ಉದ್ಯೋಗ ನೀಡಿದೆ. 53.77% ರಷ್ಟು GDP ಗೆ ಆದಾಯ ನೀಡಿದೆ. ನಮ್ಮ ದೇಶದ ಆರ್ಥಿಕತೆಗೆ ತೃತೀಯ ವಲಯದ ಕೊಡುಗೆಯೇ ಅತಿ ಹೆಚ್ಚು.
4.ಚತುರ್ಥ ವಲಯ : ಇದನ್ನು ಸಂಶೋಧನಾ
ವಲಯ ಎಂದೆನ್ನುವರು. ಕೊಲಿನ್ ಕ್ಲಾರ್ಕ್ ಎಂಬ ಅರ್ಥಶಾಸ್ತ್ರಜ್ಞ ಈ ವಲಯದ ಕುರಿತು
ಪ್ರಸ್ತಾಪಿಸಿದ್ದಾನೆ. ಮುಂದುವರೆದ ದೇಶಗಳಲ್ಲಿ ಸಂಶೋಧನಾ ವಲಯವು ಅತಿ ಹೆಚ್ಚು
ಪ್ರಾಧಾನ್ಯತೆಯನ್ನು ಹೊಂದಿದೆ.
5.ಪಂಚ ವಲಯ : ಈ ವಲಯವು ಶಾಸನ ಮತ್ತು
ನಿಯಮಗಳನ್ನು ರೂಪಿಸುವ ಘಟಕವಾಗಿದೆ. ಸರ್ಕಾರದ ಅಡಿಯಲ್ಲಿ ಎಲ್ಲಾ ವಲಯಗಳಲ್ಲಿ ಅಭಿವೃದ್ಧಿ ಸಾಧಿಸುವ
ಅಧಿಕಾರಿಗಳು, ತಜ್ಞರು, ಮತ್ತು ಸಂಶೋಧಕರನ್ನು
ಇಲ್ಲಿ ಕಾಣಬಹುದು.
ಈ ವಲಯದಲ್ಲಿ ಕೆಲಸ ಮಾಡುವವರನ್ನು ಗೋಲ್ಡ್ ಕಾಲರ್ ವೃತ್ತಿಪರರು ಎನ್ನುವರು.
ಉತ್ಪಾದನಾಂಗಗಳು
1. ಭೂಮಿ – ಗೇಣಿ
2. ಶ್ರಮ – ಕೂಲಿ
3. ಬಂಡವಾಳ
- ಬಡ್ಡಿ
4. ಸಂಘಟನೆ – ಲಾಭ
ಉತ್ಪಾದನಾ ತಂತ್ರಗಳು
ಶ್ರಮ ಸಾಂದ್ರ ಉತ್ಪಾದನೆ : ಶ್ರಮದ ಪ್ರಮಾಣ ಹೆಚ್ಚಿದ್ದು ಬಂಡವಾಳದ ಪ್ರಮಾಣ ಕಡಿಮೆಯಿರುತ್ತದೆ.
ಬಂಡವಾಳ ಸಾಂದ್ರ ಉತ್ಪಾದನೆ : ಬಂಡವಾಳದ ಪ್ರಮಾಣ ಹೆಚ್ಚಿದ್ದು ಶ್ರಮದ ಪ್ರಮಾಣ ಕಡಿಮೆಯಿರುತ್ತದೆ.
ಒಂದು ದೇಶದಲ್ಲಿ ಜನಸಂಖ್ಯೆಗಿಂತ ಅದರ ಭೂಪ್ರದೇಶ ಹೆಚ್ಚಾಗಿದ್ದರೆ ಅದನ್ನು ವಿಸ್ಪೃತ ಕೃಷಿ ಎನ್ನುವರು.
ಒಂದು ದೇಶದಲ್ಲಿ ಅದರ ಭೂಪ್ರದೇಶಕ್ಕಿಂತ ಅದರ ಜನಸಂಖ್ಯೆ ಹೆಚ್ಚಾಗಿದ್ದರೆ ಅದನ್ನು ಸಾಂದ್ರ ಕೃಷಿ ಎನ್ನುವರು.
ಮಾನವ ಅಭಿವೃದ್ಧಿ ಸೂಚ್ಯಾಂಕ (HDI)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ